ನ್ಯಾಯಾಧಿಪತಿಗಳು ಆಳುತ್ತಿದ್ದ ಆ ದಿನಗಳಲ್ಲಿ ದೇಶದೊಳಗೆ ಬರ ಉಂಟಾ ಗಿದ್ದಾಗ ಆದದ್ದೇನಂದರೆ, ಯೆಹೂದದ ಬೇತ್ಲೆ ಹೇಮಿನವನಾದ ಒಬ್ಬ ಮನುಷ್ಯನು ತನ್ನ ಹೆಂಡ ತಿಯ ಮತ್ತು ತನ್ನ ಇಬ್ಬರು ಕುಮಾರರೊಂದಿಗೆ ಮೋವಾಬ್ ದೇಶದಲ್ಲಿ ವಾಸಮಾಡಬೇಕೆಂದು ಹೋದನು.
ಆ ಮನುಷ್ಯನ ಹೆಸರು ಎಲೀಮೆಲೆ ಕನು; ಅವನ ಹೆಂಡತಿಯ ಹೆಸರು ನೊವೊಮಿ; ಅವನ ಕುಮಾರ ರಲ್ಲಿ ಒಬ್ಬನ ಹೆಸರು ಮಹ್ಲೋ ನನು, ಮತ್ತೊಬ್ಬನ ಹೆಸರು ಕಿಲ್ಯೋನನು. ಇವರು ಎಫ್ರಾತ್ಯರಾದ ಯೆಹೂದದ ಬೇತ್ಲೆಹೇಮಿನವ ರಾಗಿದ್ದರು. ಇವರು ಮೋವಾಬ್ ದೇಶಕ್ಕೆ ಬಂದು, ಅಲ್ಲಿ ವಾಸವಾಗಿದ್ದರು.
ಆದರೆ ಕರ್ತನು ತನ್ನ ಜನರಿಗೆ ರೊಟ್ಟಿಯನ್ನು ಕೊಡುವ ಹಾಗೆ ಅವರನ್ನು ದರ್ಶಿಸಿದನೆಂದು ಅವಳು ಮೋವಾಬ್ ದೇಶದಲ್ಲಿ ಕೇಳಿದ್ದರಿಂದ ಅವಳು ತನ್ನ ಸೊಸೆಯರ ಸಂಗಡ ಮೋವಾಬ್ ದೇಶದಿಂದ ಯೆಹೂದ ದೇಶಕ್ಕೆ ತಿರಿಗಿ ಹೋಗುವದಕ್ಕೋಸ್ಕರ ಪ್ರಯಾಣವಾಗಿ ತಾನು ಇದ್ದ ಸ್ಥಳವನ್ನು ಬಿಟ್ಟು ಹೊರ ಟಳು.
ಅದಕ್ಕೆ ನೊವೊಮಿಯು ನನ್ನ ಕುಮಾರ್ತೆಯರೇ, ನೀವು ಹಿಂತಿ ರುಗಿ ಹೋಗಿರಿ; ನನ್ನ ಸಂಗಡ ಯಾಕೆ ಬರುತ್ತೀರಿ? ನಿಮಗೆ ಗಂಡಂದಿರಾಗುವ ಹಾಗೆ ಇನ್ನು ನನ್ನ ಗರ್ಭದಲ್ಲಿ ನನಗೆ ಕುಮಾರರು ಇಲ್ಲವಲ್ಲಾ!
ನನ್ನ ಕುಮಾರ್ತೆ ಯರೇ, ನೀವು ಹಿಂದಕ್ಕೆ ಹೋಗಿರಿ; ನಾನು ಒಬ್ಬ ಗಂಡನಿಗೆ ಹೆಂಡತಿಯಾಗುವದಕ್ಕೆ ಪ್ರಾಯಹೋದ ವಳು. ಒಂದು ವೇಳೆ ನಿರೀಕ್ಷೆ ನನಗೆ ಉಂಟೆಂದು ಹೇಳಿ ನಾನು ಈ ಹೊತ್ತಿನ ರಾತ್ರಿಯಲ್ಲಿ ಒಬ್ಬ ಗಂಡನಿಗೆ ಸೇರಿ ನಾನು ಮಕ್ಕಳನ್ನು ಹೆತ್ತರೂ
ಅವರು ದೊಡ್ಡವ ರಾಗುವ ವರೆಗೂ ಕಾದುಕೊಳ್ಳುವಿರೋ? ಗಂಡನಿಲ್ಲದೆ ನೀವು ತಾಳಿಕೊಂಡಿರುವಿರೋ? ಬೇಡ, ನನ್ನ ಕುಮಾ ರ್ತೆಯರೇ; ಕರ್ತನ ಹಸ್ತವು ನನಗೆ ವಿರೋಧವಾಗಿ ರುವದರಿಂದ ನಿಮಗಿಂತ ನನಗೆ ಬಹು ದುಃಖವಾಗಿದೆ ಅಂದಳು.
ಅದಕ್ಕೆ ರೂತಳು ನಿನ್ನನ್ನು ಬಿಟ್ಟು ಹಿಂದಿರುಗಬೇಕೆಂದು ನನ್ನನ್ನು ಒತ್ತಾಯಮಾಡಬೇಡ; ಯಾಕಂದರೆ ನೀನು ಎಲ್ಲಿ ಹೋಗುವಿಯೋ ನಾನು ಅಲ್ಲಿಗೆ ಬರುವೆನು; ನೀನು ಎಲ್ಲಿ ಇಳುಕೊಳ್ಳುವಿಯೋ ನಾನು ಅಲ್ಲಿ ಇಳು ಕೊಳ್ಳುವೆನು; ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.
ನಾನು ಸಮೃದ್ಧಿ ಯಾಗಿ ಹೊರಟು ಹೋದೆನು; ಕರ್ತನು ನನ್ನನ್ನು ಏನೂ ಇಲ್ಲದೆ ತಿರಿಗಿ ಮನೆಗೆ ಬರಮಾಡಿದ್ದಾನೆ. ಕರ್ತನು ನನಗೆ ವಿರೋಧವಾಗಿ ಸಾಕ್ಷಿಕೊಟ್ಟು, ಸರ್ವಶಕ್ತನು ನನ್ನನ್ನು ಬಾಧಿಸಿದ್ದಾನೆ. ಆದದರಿಂದ ನೀವು ನನ್ನನ್ನು ನೊವೊಮಿ ಎಂದು ಕರೆಯುವದೇನು ಅಂದಳು.